2025 ನೇ ಸಾಲಿನ ಜಲರಥೋತ್ಸವ (ತೆಪ್ಪದ ತೇರು) ಕಾರ್ಯಕ್ರಮ.
Date : 10-08-2025
ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮಿಗಳ 96ನೇ ಪುಣ್ಯಸ್ಥರಣೆ ಅಂಗವಾಗಿ ಸಿದ್ದಾರೂಢ 'ಮಠದಲ್ಲಿ ರವಿವಾರ ಅದ್ಧೂರಿ ತಪ್ಪೋತ್ಸವ ನಡೆಯಿತು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಶಿವನಾಮ ಸಪ್ತಾಹ, ಆರೂಢ ಮಹಿಮೆ ಪ್ರವಚನ ಮಂಗಲಗೊಂಡಿತು.
ಶ್ರೀ ಸಿದ್ದಾರೂಢ ಟ್ರಸ್ಟ್ ಕಮಿಟಿಯಿಂದ ನಡೆದ ತಪ್ಪೋತ್ಸವ ಕಣ್ಣುಂಬಿಕೊಳ್ಳಲು ಭಕ್ತರು ಪಾಲ್ಗೊಂಡಿದ್ದರು. ಶ್ರಾವಣ ಮಾಸದ ನೂಲು ಹುಣ್ಣಿಮೆ ಮರುದಿನ ನಡೆವ ತೆಪ್ಪೋತ್ಸವದಲ್ಲಿ ರಾಜ್ಯ ಸೇರಿದಂತೆ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸಿದ್ದರು. 'ಓಂ ನಮಃ ಶಿವಾಯ', 'ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ', 'ಹರ ಹರ ಮಹಾದೇವ', 'ಸಿದ್ದಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ' ಎಂಬ ಘೋಷಗಳು ಮು • ಮುಗಿಲು ಮುಟ್ಟಿದ್ದವು. ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಖರ್ಜೂರ ಹಾಗೂ ಹೂವು ಹಾರಿಸಿ ಭಕ್ತಿ ಸಲ್ಲಿಸಿದರು. ವಿವಿಧೆಡೆ ಪಲ್ಲಕ್ಕಿ ಮೆರವಣಿಗೆ: ಸಿದ್ದಾರೂಢ ಮಠದ ಆವರಣದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಆರತಿ ಬೆಳಗಿ ಪಲ್ಲಕ್ಕಿಯನ್ನು ಬೀಳ್ಕೊಡಲಾಯಿತು. ವಿವಿಧ ಹೂವಿನ ಮಾಲೆಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಶ್ರೀ ಸಿದ್ದಾರೂಢರ ಮತ್ತು ಶ್ರೀ ಗುರುನಾಥಾರೂಢರ ಮೂರ್ತಿಗಳನ್ನು ಕೂರಿಸಲಾಗಿತ್ತು. ಟ್ರ್ಯಾಕ್ಟರ್ ಮೇಲೆ ಪಲ್ಲಕ್ಷ್ಮಿಯನ್ನು ಇರಿಸಿದ ಬಳಿಕ ಹಳೇ ಹುಬ್ಬಳ್ಳಿಯ ಗಣೇಶ ಪೇಟ, ಚನ್ನಪೇಟೆ ಹೀಗೆ ಸಿದ್ದಾರೂಢರು ಓಡಾಡಿದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 5 ಗಂಟೆ ವೇಳೆಗೆ ಮಠಕ್ಕೆ ವಾಪಸಾಯಿತು. ಮಠದ ಟ್ರಸ್ಟ್ ಕಮಿಟಿ ಚೇರನ್ ಚನ್ನವೀರ ಮುಂಗರವಾಡಿ, ಭಕ್ತರ ಸಭಾದ ಅಧ್ಯಕ್ಷ ಡಿ.ಆರ್. ಪಾಟೀಲ ಮಂಗಳಾರತಿ ನೆರವೇರಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಿದರು. ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಿ.ವಿ.ಮಲ್ಲಾಪುರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರಗಿ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ ಮತ್ತು ಶ್ರೀಮಠದ ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.